ಜಯ ಜಯ ಅಂಬೆ

ಜಯ ಜಯ ಅಂಬೆ ಜಯ ಜಯ ಅಂಬೆ ಜಯ ಭಾರತಾಂಬೆ

ನಿನ್ನ ಮಡಿಲಿನ ಮಕ್ಕಳು ನಾವು ನಮ್ಮನು ಹರಸಂಬೆ

ನಿನ್ನ ಶಿರದಲಿ ಕಾಶ್ಮೀರ ಪಾದದಡಿಯಲಿ ಕನ್ಯಾಕುಮಾರಿ

ನಿನ್ನ ಬಲಗೈ ಗುಜರಾತ ನಿನ್ನ ಎಡಗೈ ಅರುಣಾಚಲ ।।೧।।

ಜಯ ಜಯ ಅಂಬೆ ಜಯ ಜಯ ಅಂಬೆ ಜಯ ಭಾರತಾಂಬೆ

ಪೂರ್ವ ಪಶ್ಚಿಮಗಳ ಸೇತುವೆ ನೀ, ನಾಗರಿಕತೆಯ ಹೊಸ್ತಿಲು ನೀ

ಮನುಕುಲದ ತೊಟ್ಟಿಲು ನೀ, ಭಾಷೆಗಳ ಜನನಿ ನೀ

ಹಿಂದೂ ಸಿಖ್ ಬೌಧ ಜೈನ ಧರ್ಮಗಳ ಮಾತೆ ನೀ

ಮಾನವ ಕನಸೆಲ್ಲ ನನಸಾದ ಲೋಕ ನೀ ।।೨।।

ಜಯ ಜಯ ಅಂಬೆ ಜಯ ಜಯ ಅಂಬೆ ಜಯ ಭಾರತಾಂಬೆ

ಆಯುರ್ವೇದ ಯೋಗ ಗಣಿತ ವೇದ ವ್ಯದ್ಯ ಶಾಸ್ತ್ರಗಳ ತಾಯಿ ನೀ

ವಾಸ್ತು ಶಿಲ್ಪ ಕಲೆ ಸಾಹಿತ್ಯ ಸಂಗೀತ ನೃತ್ಯಗಳ ಧಾತೆ ನೀ

ತತ್ವ ಜ್ಞಾನ ವಿಜ್ಞಾನ ತಂತ್ರಜ್ಞಾನ ಖಗೋಳ ಭೂಗೋಳ ನೌಕಯಾನದ ತವರು ನೀ

ಮಹಾಕಾವ್ಯ ಜವಳಿ ಮಸಾಲೆ ಅದಿರುಗಳ ಆಗರ ನೀ ।।೩।।

ಜಯ ಜಯ ಅಂಬೆ ಜಯ ಜಯ ಅಂಬೆ ಜಯ ಭಾರತಾಂಬೆ

One response to “ಜಯ ಜಯ ಅಂಬೆ

Leave a comment