ಪಯಣ

ನಮ್ಮಿಬ್ಬರ ಈ ಪಯಣ ಬಾಳಿನ ಹೊಸ ಚರಣ

ಮೂಡಲಿ ಆಶಾಕಿರಣ ಇರಲಿ ಸದಾ ಹರಿದ್ವರಣ ।

ಜೀವನವ ಪ್ರಾರಂಭಿಸುತ ಹಂಚಿಕೊಳ್ಳುವ ಪರಸ್ಪರ

ಕನಸುಗಳ ನನಸಾಗಿಸುತ ಸಾಗುವ ದೂರ ದೂರ || ೧ ||

ತುಸು ಮಾತಿಂದ ಸವಿ ಮಾತಿನವರೆಗು ಹುಸಿ ಮುನಿಸಿಂದ ಬಿಸಿ ಅಪ್ಪುಗೆವರೆಗು

ಕೋಪದಿಂದ ಸಂತೋಷದವರೆಗು ವಾದದಿಂದ ಒಪ್ಪಂದದವರೆಗು ।

ಅಳುವಿಂದ ನಗುವರೆಗು ದುಃಖದಿಂದ ಸುಖದವರೆಗು

ಸಂಕೋಚದಿಂದ ಸಲ್ಲಾಪದವರೆಗು ಪ್ರೀತಿ ಶೂನ್ಯದಿಂದ ಪ್ರೇಮದವರೆಗು ।। ೨ ।।

ವರುಷದಲ್ಲಿ ಹರುಷಗಳಲವು ಪ್ರತಿದಿನ ಹೊಸ ತಿರುವು

ಜೀವನದ ತುಣುಕುಗಳೆಲ್ಲವು ಕಂಡ ಹೊಸ ಅನುಭವವು ।

ಹಬ್ಬಗಳು, ಆಚರಣೆಗಳು, ಬಂಧುಗಳು, ಔತಣಗಳು

ಅಚ್ಚರಿಗಳು, ಉಡುಗೊರೆಗಳು, ಜಾತ್ರೆಗಳು, ಯಾತ್ರೆಗಳು ।। ೩ ।।

ಆರೈಕೆಯ ಮಾಡುತ ಕಾಳಜಿಯ ತೋರುತ ಸಂಬಂಧವ ಬೆಸೆಯುತ

ಆಸೆಗಳ ಪೂರೈಸುತ ಒಬ್ಬರನ್ನೊಬ್ಬರು ಅರಿಯುತ ಹೊಂದಾಣಿಕೆಯಾಗುತ ।

ಹೇರಿಳಿತಗಳ ಸ್ವೀಕರಿಸುತ ಪಾಠಗಳ ಕಲಿಯುತ ಕಂಡಿರದ ಕಾಣುತ

ನಮ್ಮಿಬ್ಬರ ಈ ಪಯಣ ಬರೆಯಲಿ ಹೊಸ ದಿಗಂತ ।। ೪ ।।

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s